ಸ್ಟಾರ್ ಶಿಕ್ಷಣ ಸಾಲ - ಭಾರತದಲ್ಲಿ ಅಧ್ಯಯನಗಳು

BOI


ಪ್ರಯೋಜನಗಳು

  • ಯಾವುದೇ ದಾಖಲೆಪತ್ರಗಳ ಶುಲ್ಕವಿಲ್ಲ
  • ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲ
  • ಪೂರ್ವಪಾವತಿಗೆ ಯಾವುದೇ ದಂಡವಿಲ್ಲ
  • ಯಾವುದೇ ಸಂಸ್ಕರಣಾ ಶುಲ್ಕಗಳಿಲ್ಲ
  • ರೂ. 7.50 ಲಕ್ಷಗಳವರೆಗೆ ಯಾವುದೇ ಮೇಲಾಧಾರ ಭದ್ರತೆ ಇಲ್ಲ
  • ರೂ. 4.00 ಲಕ್ಷಗಳವರೆಗೆ ಶೂನ್ಯ ಮಾರ್ಜಿನ್
  • ಲಭ್ಯವಿರುವ ಇತರ ಬ್ಯಾಂಕ್ ಗಳಿಂದ ಸಾಲ ಸೌಲಭ್ಯವನ್ನು ಸ್ವಾಧೀನಪಡಿಸಿಕೊಳ್ಳುವುದು

ವೈಶಿಷ್ಟ್ಯಗಳು

  • ಭಾರತದಲ್ಲಿ ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲಗಳು ಅಂದರೆ ಭಾರತದಲ್ಲಿನಿಯಮಿತ ಪೂರ್ಣ ಸಮಯದ ಪದವಿ / ಸ್ನಾತಕೋತ್ತರ ಕೋರ್ಸ್‌ಗಳು
  • ಭಾರತದಲ್ಲಿ ವೈದ್ಯಕೀಯ ಮತ್ತು ವೈದ್ಯಕೀಯೇತರ ಕೋರ್ಸ್ ಗಳಿಗೆ 150 ಲಕ್ಷ ರೂ.ಗಳವರೆಗಿನ ಸಾಲದ ಮೊತ್ತವನ್ನು ಪರಿಗಣಿಸಬಹುದು.

ಸಾಲದ ಪ್ರಮಾಣ

  • ನರ್ಸಿಂಗ್ ಮತ್ತು ವೈದ್ಯಕೀಯೇತರ ಕೋರ್ಸ್‌ಗಳನ್ನು ಹೊರತುಪಡಿಸಿ ವೈದ್ಯಕೀಯ ಕೋರ್ಸ್‌ಗಳಿಗೆ ಗರಿಷ್ಠ ರೂ.150.00 ಲಕ್ಷ.
  • ವಿದ್ಯಾರ್ಥಿಗಳ ಕೋರ್ಸ್ ಮುಗಿದ ಬಳಿಕ ಸಂಭಾವ್ಯ ಗಳಿಕೆಯನ್ನು ಆಧರಿಸಿ ವೆಚ್ಚಗಳನ್ನು ಭರಿಸುವ ಅಗತ್ಯತೆಯನ್ನು ಪರಿಗಣಿಸಲಾದ ಹಣಕಾಸು

BOI


ಒಳಗೊಳ್ಳುವ ವೆಚ್ಚಗಳು

  • ಕಾಲೇಜು / ಶಾಲೆ / ಹಾಸ್ಟೆಲ್ ಗೆ ಪಾವತಿಸಬೇಕಾದ ಶುಲ್ಕಗಳು
  • ಪರೀಕ್ಷೆಯ / ಗ್ರಂಥಾಲಯದ ಶುಲ್ಕ.
  • ಪುಸ್ತಕಗಳು / ಸಲಕರಣೆಗಳು / ಉಪಕರಣಗಳ ಖರೀದಿ
  • ಕಂಪ್ಯೂಟರ್ / ಲ್ಯಾಪ್ ಟಾಪ್ ಖರೀದಿ.
  • ಎಚ್ಚರಿಕೆ ಠೇವಣಿ / ಕಟ್ಟಡ ನಿಧಿ / ಸಂಸ್ಥೆಯ ಬಿಲ್ ಗಳು / ರಸೀದಿಗಳಿಂದ ಬೆಂಬಲಿತ ಮರುಪಾವತಿಸಬಹುದಾದ ಠೇವಣಿ.
  • ಸಾಲದ ಒಟ್ಟು ಅವಧಿಗಾಗಿ ವಿದ್ಯಾರ್ಥಿ / ಸಹ-ಸಾಲಗಾರರಿಗೆ ಜೀವ ವಿಮಾ ಕಂತು
  • ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಇತರ ವೆಚ್ಚಗಳು.

ವಿಮೆ

  • ಎಲ್ಲಾ ವಿದ್ಯಾರ್ಥಿ ಸಾಲಗಾರರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಚ್ಛಿಕ ಟರ್ಮ್ ಇನ್ಶೂರೆನ್ಸ್ ಕವರ್‌ಅನ್ನು ನೀಡಲಾಗುತ್ತದೆ ಮತ್ತು ವಿಮಾ ಕಂತನ್ನು ಹಣಕಾಸಿನ ಅಂಗವಾಗಿಯೂ ಸೇರಿಸಬಹುದು.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ನೀವು ಬ್ಯಾಂಕಿನ ಹತ್ತಿರದ ಶಾಖೆಯನ್ನು ಸಂಪರ್ಕಿಸಬಹುದು. ಸಾಲವನ್ನು ಬ್ಯಾಂಕ್ ಆಫ್ ಇಂಡಿಯಾದ ಸಂಪೂರ್ಣ ವಿವೇಚನೆಯ ಮೇರೆಗೆ ನೀಡಲಾಗುತ್ತದೆ.

BOI


ವಿದ್ಯಾರ್ಥಿಯ ಅರ್ಹತೆ

  • ವಿದ್ಯಾರ್ಥಿಗಳು ಭಾರತೀಯ ರಾಷ್ಟ್ರೀಯ / ಪಿಐಒ / ಒಸಿಐ ಆಗಿರಬೇಕು.
  • ಎಚ್ಎಸ್ಸಿ (10 ಪ್ಲಸ್ 2 ಅಥವಾ ತತ್ಸಮಾನ) ಪೂರ್ಣಗೊಳಿಸಿದ ನಂತರ ಪ್ರವೇಶ ಪರೀಕ್ಷೆ / ಮೆರಿಟ್ ಆಧಾರಿತ ಆಯ್ಕೆ ಪ್ರಕ್ರಿಯೆಯ ಮೂಲಕ ಯುಜಿಸಿ / ಸರ್ಕಾರ / ಎಐಸಿಟಿಇ ಯಿಂದ ಅನುಮೋದಿತ ಕೋರ್ಸ್‌ಗಳಿಗೆ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಪ್ರವೇಶ ಪಡೆದಿರಬೇಕು.
  • ಪ್ರವೇಶದ ಮಾನದಂಡವು ಪ್ರವೇಶ ಪರೀಕ್ಷೆ ಅಥವಾ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಆಧರಿಸಿರದಿದ್ದರೆ, ಶಿಕ್ಷಣ ಸಾಲವು ವಿದ್ಯಾರ್ಥಿಯ ಉದ್ಯೋಗಾರ್ಹತೆ ಮತ್ತು ಸಂಬಂಧಿತ ಸಂಸ್ಥೆಯ ಖ್ಯಾತಿಯನ್ನು ಆಧರಿಸಿರಬಹುದು.

ಒಳಗೊಳ್ಳುವ ಕೋರ್ಸ್‌ಗಳು

  • ಈ ಕೋರ್ಸ್‌‌ಅನ್ನು ಭಾರತದಲ್ಲಿ ಈ ಅಧ್ಯಯನದ ವಿಷಯಗಳಿಗೆ ಸಂಬಂಧಿಸಿದ ನಿಯೋಜಿತ ಶೈಕ್ಷಣಿಕ ಪ್ರಾಧಿಕಾರ / ನಿಯಂತ್ರಕ ಸಂಸ್ಥೆಗಳು ಅನುಮೋದಿಸಿರಬೇಕು / ಗುರುತಿಸಿರಬೇಕು.

ಒಳಗೊಳ್ಳುವ ಕೋರ್ಸ್‌ಗಳಿಗಾಗಿ ದಯವಿಟ್ಟು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ

ಲಾಭಾಂಶ

ಸಾಲದ ಪ್ರಮಾಣ ಲಾಭಾಂಶ %
ರೂ.4.00 ಲಕ್ಷಗಳವರೆಗೆ ಇಲ್ಲ
ರೂ. 4.00 ಲಕ್ಷಕ್ಕೂ ಮೇಲ್ಪಟ್ಟು 5%

BOI


ಭದ್ರತೆ

4 ಲಕ್ಷ ರೂಗಳವರೆಗೆ.

  • ಪೋಷಕ(ರು) ಸಹ ಸಾಲಗಾರರಾಗಿ ಅಥವಾ ಜಂಟಿ ಸಾಲಗಾರರಾಗಿ.
  • ಸಿಜಿಎಫ್ಎಸ್ಎಎಲ್ ಅಡಿಯಲ್ಲಿ ರಕ್ಷಣೆ ಪಡೆಯುವುದು ಕಡ್ಡಾಯವಾಗಿದೆ.

ರೂ.4 ಲಕ್ಷಕ್ಕಿಂತ ಹೆಚ್ಚು ಮತ್ತು ರೂ.7.50 ಲಕ್ಷಗಳವರೆಗೆ

  • ಪೋಷಕ(ರು) ಸಹ ಸಾಲಗಾರರು ಅಥವಾ ಜಂಟಿ ಸಾಲಗಾರರಾಗಬಹುದು,
  • ಸಿಜಿಎಫ್ಎಸ್ಇಎಲ್ ಅಡಿಯಲ್ಲಿ ರಕ್ಷಣೆ ಪಡೆಯುವುದು ಕಡ್ಡಾಯವಾಗಿದೆ.

ರೂ.7.50 ಲಕ್ಷಕ್ಕಿಂತ ಹೆಚ್ಚು

  • ಪೋಷಕ(ರು) ಸಹ ಸಾಲಗಾರರಾಗಿ ಅಥವಾ ಜಂಟಿ ಸಾಲಗಾರರಾಗಿ.
  • ಬ್ಯಾಂಕಿಗೆ ಸ್ವೀಕಾರಾರ್ಹವಾದ ಸೂಕ್ತ ಮೌಲ್ಯದ ಸ್ಪಷ್ಟ ಪೂರಕ ಭದ್ರತೆ.
  • ಕಂತುಗಳ ಪಾವತಿಗಾಗಿ ವಿದ್ಯಾರ್ಥಿಯ ಭವಿಷ್ಯದ ಆದಾಯದ ನಿಯೋಜನೆ.

ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು, ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಅಡವಿಡಲು ಅನುಮತಿಸಲಾದ ರಾಜ್ಯಗಳಲ್ಲಿ ಮಾತ್ರ ಕೃಷಿ ಭೂಮಿಯನ್ನು ಸ್ಪಷ್ಟ ಪೂರಕ ಭದ್ರತೆಯಾಗಿ ಪರಿಗಣಿಸಬಹುದು.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ನೀವು ಬ್ಯಾಂಕಿನ ಹತ್ತಿರದ ಶಾಖೆಯನ್ನು ಸಂಪರ್ಕಿಸಬಹುದು. ಸಾಲವನ್ನು ಬ್ಯಾಂಕ್ ಆಫ್ ಇಂಡಿಯಾದ ಸಂಪೂರ್ಣ ವಿವೇಚನೆಯ ಮೇರೆಗೆ ನೀಡಲಾಗುತ್ತದೆ.

BOI


ಬಡ್ಡಿ ದರ

ಸಾಲದ ಮೊತ್ತ (ಲಕ್ಷಗಳಲ್ಲಿ) ಬಡ್ಡಿಯ ದರ
ರೂ.7.50 ಲಕ್ಷಗಳವರೆಗಿನ ಸಾಲಗಳಿಗೆ 1 ವರ್ಷದ ಆರ್ ಬಿ ಎಲ್ ಆರ್ +1.70%
ರೂ.7.50 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕಾಗಿ 1 ವರ್ಷದ ಆರ್ ಬಿ ಎಲ್ ಆರ್ +2.50%

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು, ದಯವಿಟ್ಟು ಕೆಳಗಿನ ಲಿಂಕ್‌ಅನ್ನು ಕ್ಲಿಕ್ ಮಾಡಿ

ಶುಲ್ಕಗಳು

  • ಯಾವುದೇ ಸಂಸ್ಕರಣಾ ಶುಲ್ಕಗಳಿಲ್ಲ
  • ವಿ ಎಲ್ ಪಿ ಪೋರ್ಟಲ್ ಶುಲ್ಕ ರೂ. 100.00 + 18% ಜಿ ಎಸ್ ಟಿ
  • ಶಿಕ್ಷಣದ ಯೋಜನೆಯಲ್ಲಿ ಯಾವುದೇ ಬದಲಾವಣೆಯಾದರೆ ಈ ಯೋಜನೆಯ ಹೊರಗಿನ ಶಿಕ್ಷಣದ ಅನುಮೋದನೆಯನ್ನು ಒಳಗೊಂಡು ನೀಡಬೇಕಾದ ಒಂದು ಬಾರಿಯ ದರಗಳು
ಸ್ಕೀಮ್ ನಿಯಮಗಳು ಶುಲ್ಕಗಳು
ರೂ.4.00 ಲಕ್ಷಗಳವರೆಗೆ ರೂ. 500/-
ರೂ.4.00 ಲಕ್ಷಕ್ಕಿಂತ ಹೆಚ್ಚು ಮತ್ತು ರೂ.7.50 ಲಕ್ಷಗಳವರೆಗೆ ರೂ.1,500/-
ರೂ.7.50 ಲಕ್ಷಕ್ಕೂ ಹೆಚ್ಚು ರೂ.3,000/-
  • ಸಲ್ಲಿಸಲಾದ ಸಾಲದ ಅರ್ಜಿಗಳನ್ನು ಸಂಸ್ಕರಿಸಲು ಸಾಮಾನ್ಯ ತಾಣವನ್ನು ನಿರ್ವಹಿಸುವ ಬಾಹ್ಯ ಸಂಸ್ಥೆಗಳ ಸೇವಾ ಪೂರೈಕೆದಾರರು ವಿಧಿಸುವ ಹೆಚ್ಚುವರಿ ಶುಲ್ಕ / ವೆಚ್ಚಗಳು ಏನಾದರೂ ಇದ್ದರೆ, ಅವನ್ನು ವಿದ್ಯಾರ್ಥಿ ಅರ್ಜಿದಾರರೇ ಪಾವತಿಸಬೇಕಾಗಬಹುದು

ಮರುಪಾವತಿಯ ಅವಧಿ

  • ಶಿಕ್ಷಣದ ಅವಧಿ ಮುಗಿಯುವವರೆಗೆ ಮತ್ತು ಇನ್ನೂ ಒಂದು ವರ್ಷದಷ್ಟು ತಾತ್ಕಾಲಿಕ ಸ್ಥಗಿತತೆ.
  • ಮರುಪಾವತಿಯ ಅವಧಿ: ಮರುಪಾವತಿ ಪ್ರಾರಂಭವಾದ ದಿನಾಂಕದಿಂದ 15 ವರ್ಷಗಳು

BOI


ಸಾಲ ಒಳಗೊಳ್ಳುವ ವ್ಯಾಪ್ತಿ

  • "ಭಾರತ ಮತ್ತು ವಿದೇಶಗಳಲ್ಲಿ ಅಧ್ಯಯನವನ್ನು ಮುಂದುವರಿಸಲು ಐ ಬಿ ಎ ಮಾದರಿಯ ಶಿಕ್ಷಣ ಸಾಲದ ಯೋಜನೆ"ಯ ಮಾರ್ಗಸೂಚಿಗಳಿಗೆ ಅನುಸಾರವಾಗಿ ರೂ.7.50 ಲಕ್ಷಗಳವರೆಗಿನ ಎಲ್ಲಾ ಶೈಕ್ಷಣಿಕ ಸಾಲಗಳು ನ್ಯಾಶನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟೀ ಕಂಪನಿ (ಎನ್ ಸಿ ಜಿ ಟಿ ಸಿ)ಯಿಂದ ಸಿ ಜಿ ಎಫ್ ಎಸ್ ಇ ಎಲ್ ಅಡಿಯಲ್ಲಿ ವ್ಯಾಪ್ತಿಗೆ ಅರ್ಹವಾಗಿವೆ.

ಇತರ ಷರತ್ತುಗಳು

  • ಅಗತ್ಯತೆ / ಬೇಡಿಕೆಗೆ ಅನುಗುಣವಾಗಿ ಸಾಲವನ್ನು ಹಂತ ಹಂತವಾಗಿ, ಸಂಸ್ಥೆ / ಪುಸ್ತಕಗಳು / ಉಪಕರಣಳು/ ಸಲಕರಣೆಗಳ ಮಾರಾಟಗಾರರಿಗೆ ಸಾಧ್ಯವಾದಷ್ಟೂ ಮಟ್ಟಿಗೆ ನೇರವಾಗಿ ವಿತರಿಸಲಾಗುವುದು
  • ಮುಂದಿನ ಕಂತನ್ನು ಪಡೆಯುವ ಮುನ್ನ ವಿದ್ಯಾರ್ಥಿ ಹಿಂದಿನ ಅವಧಿ / ಅರ್ಧವಾರ್ಷಿಕ ಅಂಕಪಟ್ಟಿಯನ್ನು ಹಾಜರುಪಡಿಸಬೇಕು
  • ಇತ್ತೀಚಿನ ವಿಳಾಸದಲ್ಲಿ ಏನಾದರೂ ಬದಲಾವಣೆ ಇದ್ದರೆ ವಿದ್ಯಾರ್ಥಿ / ಪೋಷಕರು ಇದನ್ನು ಒದಗಿಸಬೇಕು.
  • ಕೋರ್ಸ್ ಬದಲಾವಣೆ/ ಅಧ್ಯಯನವನ್ನು ಕೊನೆಗೊಳಿಸುವುದು/ ಅಧ್ಯಯನವನ್ನು ನಡುವಿನಲ್ಲಿ ಬಿಡುವುದು/ ಕಾಲೇಜು / ಸಂಸ್ಥೆಯಿಂದ ಯಾವುದೇ ಶುಲ್ಕದ ಮರುಪಾವತಿ / ಉದ್ಯೋಗ ಪಡೆದುಕೊಳ್ಳಲು ಯಶಸ್ವಿಯಾಗುವುದು / ಉದ್ಯೋಗದಲ್ಲಿ ಹಿನ್ನಡೆ / ಉದ್ಯೋಗ ಬದಲಾವಣೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿ / ಪೋಷಕರು ತಕ್ಷಣವೇ ಶಾಖೆಗೆ ಮಾಹಿತಿ ನೀಡಬೇಕು.
  • ವಿದ್ಯಾರ್ಥಿಗಳು ಎನ್ ಎಸ್ ಡಿ ಎಲ್ ಇ-ಗವರ್ನೆನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ವಿದ್ಯಾ ಲಕ್ಷ್ಮಿ ತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ವಿದ್ಯಾ ಲಕ್ಷ್ಮಿ ತಾಣದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ನೀವು ಬ್ಯಾಂಕಿನ ಹತ್ತಿರದ ಶಾಖೆಯನ್ನು ಸಂಪರ್ಕಿಸಬಹುದು. ಸಾಲವನ್ನು ಬ್ಯಾಂಕ್ ಆಫ್ ಇಂಡಿಯಾದ ಸಂಪೂರ್ಣ ವಿವೇಚನೆಯ ಮೇರೆಗೆ ನೀಡಲಾಗುತ್ತದೆ.

BOI


ಅವಶ್ಯಕ ದಾಖಲೆಪತ್ರಗಳು

ದಾಖಲೆಪತ್ರ ವಿದ್ಯಾರ್ಥಿ ಸಹ-ಅರ್ಜಿದಾರರು
ಗುರುತಿನ ಪುರಾವೆ (ಪ್ಯಾನ್ ಮತ್ತು ಆಧಾರ್) ಹೌದು ಹೌದು
ವಿಳಾಸದ ಪುರಾವೆ ಹೌದು ಹೌದು
ಆದಾಯದ ಪುರಾವೆ (ಐಟಿಆರ್ / (ಐಟಿಆರ್/ನಮೂನೆ6/ಸ್ಯಾಲರಿ ಸ್ಲಿಪ್ ಇತ್ಯಾದಿ) ಇಲ್ಲ ಹೌದು
ಶೈಕ್ಷಣಿಕ ದಾಖಲೆಗಳು (X, XII, ಒಂದು ವೇಳೆ ಅನ್ವಯಗೊಳ್ಳುವುದಾದರೆ ಪದವಿ) ಹೌದು ಇಲ್ಲ
ಪ್ರವೇಶ/ಅರ್ಹತಾ ಪರೀಕ್ಷೆಯ ಫಲಿತಾಂಶದ ಪುರಾವೆ (ಅನ್ವಯಿಸಿದರೆ) ಹೌದು ಇಲ್ಲ
ಅಧ್ಯಯನ ವೆಚ್ಚಗಳ ಅನುಸೂಚಿ ಹೌದು ಇಲ್ಲ
ಪಾಸ್‌ಪೋರ್ಟ್ ಗಾತ್ರದ 2 ಛಾಯಾಚಿತ್ರಗಳು ಹೌದು ಹೌದು
1 ವರ್ಷದ ಬ್ಯಾಂಕ್ ಖಾತೆಯ ವಿವರಗಳು ಇಲ್ಲ ಹೌದು
ವಿಎಲ್ಪಿ ಪೋರ್ಟಲ್ ಉಲ್ಲೇಖ ಸಂಖ್ಯೆ ಹೌದು ಇಲ್ಲ
ವಿಎಲ್ಪಿ ಪೋರ್ಟಲ್ ಅಪ್ಲಿಕೇಶನ್ ಸಂಖ್ಯೆ ಹೌದು ಇಲ್ಲ
ಪೂರಕ ಭದ್ರತಾ ವಿವರಗಳು ಮತ್ತು ದಾಖಲೆಗಳು, ಒಂದು ವೇಳೆ ಯಾವುದಾದರೂ ಇದ್ದರೆ ಇಲ್ಲ ಹೌದು
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ನೀವು ಬ್ಯಾಂಕಿನ ಹತ್ತಿರದ ಶಾಖೆಯನ್ನು ಸಂಪರ್ಕಿಸಬಹುದು. ಸಾಲವನ್ನು ಬ್ಯಾಂಕ್ ಆಫ್ ಇಂಡಿಯಾದ ಸಂಪೂರ್ಣ ವಿವೇಚನೆಯ ಮೇರೆಗೆ ನೀಡಲಾಗುತ್ತದೆ.
Star-Education-Loan---Studies-in-India